Culturalindia.org - Literature - Kannada - Kuvempu Poem - Elladaru Iru
 
ಎಲ್ಲಾದರು ಇರು... ಎಂತಾದರು ಇರು...
 

ಎಲ್ಲಾದರು ಇರು... ಎಂತಾದರು ಇರು...
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮಗೆ ಕಲ್ಪತರು!


ನೀ ಮೆಟ್ಟುವ ನೆಲ - ಅದೆ ಕರ್ನಾಟಕ!
ನೀನೇರುವ ಮಲೆ - ಸಹ್ಯಾದ್ರಿ
ನೀ ಮುಟ್ಟುವ ಮರ - ಶ್ರೀಗಂಧದ ಮರ
ನೀ ಕುಡಿಯುವ ನೀರ್ - ಕಾವೇರಿ!


ಪಂಪನನೋದುವ ನಿನ್ನಾ ನಾಲಗೆ
ಕನ್ನಡವೆ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ


ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪೆಂಪಿನ ಬನವಾಸಿಗೆ ಕರಗುವ ಮನ


ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ


ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾತನ ಮನ


ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್


ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಕನ್ನಡವೇ ಮಿಥ್ಯ!


- ಕುವೆಂಪು

 


Comments:
 
No comments added yet
 
 
 
Welcome
 
Logout


Comment on this article



 

Personalities | Institutions | Articles | Knowledge Store | Cultural Quiz | About Us | Contact Us | Help Us | Home