|
|
| |
|
ಮಾನವನ ಜೀವನದ ಉದ್ದಿಶ್ಯವನ್ನು ನಾಲ್ಕು ಪುರುಷಾರ್ಥಗಳನ್ನಾಗಿ ವಿಂಗಡಿಸಿ,
ಅವುಗಳಲ್ಲಿ ಕಡೆಯದಾದ ಮೋಕ್ಷವೇ ಪರಮಪುರುಷಾರ್ಥವೆಂದೂ, ಅದಕ್ಕೆ ಪೂರಕವಾಗಿಯೇ ಉಳಿದ
ಪುರುಷಾರ್ಥಗಳನ್ನು ಉಪಭೋಗಿಸಬೇಕೆಂದು ವೇದೋಪನಿಷತ್ತುಗಳು ಹೇಳುತ್ತವೆ. ಈ
ಮೋಕ್ಷಕ್ಕಾಗಿ ನಿರ್ಗುಣ, ನಿರಾಕಾರ ಪರಬ್ರಹ್ಮವಸ್ತುವಿನ ಜ್ಞಾನವೂ, ಅದನ್ನು ಹೊಂದಲು
ಸಾಧನವಾದ ಚಿತ್ತಶುದ್ಧಿಯನ್ನು ಸಂಪಾದಿಸಲು ಕರ್ಮೋಪಾಸನೆಗಳೂ ಸಾಧಕಗಳೆಂದು ಈ
ಗ್ರಂಥಗಳಲ್ಲಿ ಹೇಳಿದೆ. ವೇದೋಕ್ತಕರ್ಮಗಳು ಬಾಹ್ಯಪರಿಸರದ ಅನುಕೂಲಗಳನ್ನು
ಬಯಸುವುದರಿಂದ ಅವುಗಳ ಆಚರಣೆಯು ಎಲ್ಲಾ ಕಾಲಗಳಲ್ಲಿಯೂ ಸುಲಭಸಾಧ್ಯವಲ್ಲ. ಆದರೆ
ನಿರಾಕಾರವಸ್ತುವಿನ ಜ್ಞಾನವನ್ನು ಹೊಂದುವ ಮಾರ್ಗದಲ್ಲಿ ಸಗುಣಸಾಕಾರ ವಸ್ತುವನ್ನು
ಭಾವಿಸಿಕೊಂಡು ಅದರಲ್ಲಿ ಏಕಾಗ್ರತೆಯನ್ನು ಹೊಂದಲು ಸಹಾಯ ಮಾಡುವ ಉಪಾಸನೆಯು ಅಂತರಂಗದ
ಸಾಧನವಾಗಿರುವುದರಿಂದ ಬಾಹ್ಯಪರಿಸರದ ಅನುಕೂಲವಿಲ್ಲದಿದ್ದರೂ ಸಹ ಆಚರಿಸಲು
ಸುಲಭವಾಗಿರುತ್ತದೆ.
ಇಂತಹ ಉಪಾಸನೆಗಳಲ್ಲಿ ಸಾಧಕನು ತನ್ನ ಇಷ್ಟದೈವವನ್ನು ಕುರಿತ ಸ್ತೋತ್ರಪಠನ,
ಮಂತ್ರಜಪ, ಧ್ಯಾನ, ಅರ್ಚನ ಮುಂತಾದವುಗಳ ಮೂಲಕ ಆರಾಧಿಸಬೇಕು. ಆ ಉಪಾಸ್ಯದೈವವನ್ನು
ಪರಬ್ರಹ್ಮಸ್ವರೂಪವೆಂದೇ ಭಾವಿಸಿ ಆರಾಧಿಸಿದಾಗ ಚಿತ್ತಶುದ್ಧಿಯನ್ನೂ
ಸಂಪಾದಿಸಿಕೊಳ್ಳುತ್ತಾನೆ.
ಇಂತಹ ಸಗುಣರೂಪೀ ದೇವತೆಗಳಲ್ಲಿ ಸ್ವಯಂತೇಜೋಮಯನಾಗಿರುವ ಸೂರ್ಯನು ಪ್ರಾಣಿಗಳಿಂದ
ಯಾವ ಪ್ರತಿಫಲವನ್ನೂ ಬಯಸದೆ, ಜಗತ್ತಿಗೆಲ್ಲ ಬೆಳಕನ್ನು ನೀಡುತ್ತಾ ವೇದಕಾಲದಿಂದಲೂ
ಎಲ್ಲರ ಆರಾಧ್ಯದೈವವೆನಿಸಿದ್ದಾನೆ.
ಆದಿತ್ಯ, ರವಿ, ಸವಿತೃ ಮುಂತಾದ ಅಭಿಧಾನವುಳ್ಳ ಸೂರ್ಯನ ಉಪಾಸನಾಸಾಹಿತ್ಯಗಳಲ್ಲಿ
ಶ್ರೀ ವಾಲ್ಮೀಕಿ ರಾಮಾಯಣದ `ಆದಿತ್ಯಹೃದಯ'ವು ಅತ್ಯಂತ ಪ್ರಮುಖ ಸ್ಥಾನವನ್ನು
ಪಡೆದಿದೆ.
ಯುದ್ಧಕಾಂಡದ ೧೦೭ನೇ ಸರ್ಗದಲ್ಲಿ ಶ್ರೀರಾಮನು ರಾವಣಸಂಹಾರವನ್ನು ಕುರಿತು
ಚಿಂತಾಕ್ರಾಂತನಾಗಿರುವಾಗ ಅಗಸ್ತ್ಯ ಮಹರ್ಷಿಗಳು ಆತನಿಗೆ ಗುಹ್ಯವೂ, ಸನಾತನವೂ,
ಸರ್ವಶತ್ರುವಿನಾಶಕವೂ ಆದ `ಆದಿತ್ಯಹೃದಯ' ವೆಂಬ ಸ್ತೋತ್ರಮಂತ್ರವನ್ನು
ಉಪದೇಶಿಸುತ್ತಾರೆ.
`ತತೋ ಯುದ್ಧಪರಿಶ್ರಾಂತಂ' ಎಂಬ ಶ್ಲೋಕದಿಂದ ಪ್ರಾರಂಭವಾಗಿ `ವಚಸ್ತ್ವರೇತಿ'
ಎಂಬಲ್ಲಿಯವರೆಗಿನ ಈ ಸ್ತೋತ್ರಭಾಗದಲ್ಲಿ ಒಟ್ಟು ೩೧ ಶ್ಲೋಕಗಳಿವೆ.
ಸೂರ್ಯನಮಸ್ಕಾರವನ್ನು ಮಾಡುವಾಗ ಅರುಣಮಂತ್ರಗಳನ್ನು ಹೇಳುವುದರೊಂದಿಗೆ ಆರನೆಯ
ಶ್ಲೋಕದ `ರಶ್ಮಿಮಂತಂ' ಎಂಬ ಶಬ್ದದಿಂದ `ರವಿಃ, ಪ್ರಭುಃ' ಎಂಬಲ್ಲಿಯವರೆಗೆ `ನಮಃ'
ಎಂಬ ಶಬ್ದವನ್ನು ಸೇರಿಸಿ ಸೂರ್ಯನಮಸ್ಕಾರವನ್ನೂ, ಅರ್ಚನೆಯನ್ನೂ ಮಾಡುವ ಪದ್ಧತಿಯೂ
ಉಂಟು. ಆದಿತ್ಯಹೃದಯಂ ಎಂಬ ಈ ಶಬ್ದಕ್ಕೆ ಆದಿತ್ಯಸ್ಯ ಹೃದಯಂ (ಸೂರ್ಯನನ್ನು
ಪ್ರತಿಪಾದಿಸುವುದು) ಆದಿತ್ಯಹೃದಯಂ ಎಂದೂ, ಆದಿತ್ಯ ಶಬ್ದವೇ
ಸೂರ್ಯಮಂಡಲವೆಂದಾದಲ್ಲಿ, ತಸ್ಯ ಹೃದಯಂ - ಆ ಮಂಡಲದಲ್ಲಿರುವ ಪರಮಾತ್ಮನ -
ಉಪಾಸ್ಯದೇವತೆಯ - ಪ್ರತಿಪಾದನೆಯೆಂದೂ ಅರ್ಥ.
ಈ ಆದಿತ್ಯಹೃದಯದಲ್ಲಿ ಒಟ್ಟು ೧೨೫ ನಾಮಗಳಿವೆಯೆಂದು ಕತಕರೂ, `ಸರ್ವದೇವಾತ್ಮಕೋ
ಹ್ಯೇಷಃ' ಎಂಬಲ್ಲಿಂದ `ಲೋಕಸಾಕ್ಷಿಣೇ' ಎಂಬವರೆಗೆ ೧೦೮ ನಾಮಗಳು ಈ ಸ್ತೋತ್ರದ
ನಾಮಮಂತ್ರವೆಂದು ಮಹೇಶ್ವರತೀರ್ಥರೂ ಅಭಿಪ್ರಾಯಪಡುತ್ತಾರೆ. ಆದರೆ
ವಿಶಿಷ್ಟಾದ್ವೈತವ್ಯಾಖ್ಯಾತೃಗಳಾದ ಗೋವಿಂದರಾಜರು ಈ ಆದಿತ್ಯಹೃದಯ ಸ್ತೋತ್ರವು
ಪ್ರಕ್ಷಿಪ್ತವೆಂದು ಪ್ರತಿಪಾದಿಸುತ್ತಾರೆ. `ಈ ಸ್ತೋತ್ರವು ಕೆಲವು ಪ್ರಾಚೀನ ರಾಮಾಯಣ
ಪ್ರತಿಗಳಲ್ಲಿ ದೊರಕುವುದಿಲ್ಲ. ರಾಮಾಯಣದ ಅತ್ಯಂತ ಪ್ರಾಚೀನವ್ಯಾಖ್ಯಾನವನ್ನು
ರಚಿಸಿರುವ ಉಡಾರಿಯು ಈ ಸರ್ಗಕ್ಕೆ ವ್ಯಾಖ್ಯಾನವನ್ನು ಬರೆದಿಲ್ಲ. ಈ ರಾಮಾಯಣವು
ಪ್ರಾರಂಭದಿಂದಲೂ ಶ್ರೀಮನ್ನಾರಾಯಣಪರವೇ ಆಗಿದ್ದು ಈ ಸ್ತೋತ್ರವು ಮಾತ್ರ
ಸೂರ್ಯದೇವತಾಪರವಾಗಿದೆ. ಅಲ್ಲದೆ ಉಡಾರಿಯು ಯುದ್ಧಕಾಂಡದಲ್ಲಿ ೧೩೦ ಸರ್ಗಗಳಿವೆಯೆಂದು
ಹೇಳುತ್ತಾನೆ. ಆದರೆ ಈ ಸ್ತೋತ್ರವುಳ್ಳ ಸರ್ಗವನ್ನೂ ಸೇರಿಸಿದರೆ ೧೩೧
ಸರ್ಗಗಳಾಗುತ್ತವೆ.
ಸೂರ್ಯನ ಮಂಡಲದಿಂದ ಉಂಟಾಗುವ ಈ ತೇಜಸ್ಸು `ಯಸ್ಯ ಭಾಸಾ ಸರ್ವಮಿದಂ ವಿಭಾತಿ' ಎಂಬ
ಶ್ರುತಿವಾಕ್ಯದಂತೆ ಅಗ್ನಿ, ನಕ್ಷತ್ರಾದಿಗಳ ತೇಜಸ್ಸಿನಂತೆ ನಮ್ಮಗಳ ಹೃದಯದಲ್ಲಿ
ಆತ್ಮಸ್ವರೂಪದಿಂದ ನೆಲಸಿರುವ ಭಗವಂತನ ತೇಜಸ್ಸಿನ ಒಂದು ಅಂಶ ಮಾತ್ರವಾಗಿದೆ. `ಯ
ಏಷೋಽಂತರಾದಿತ್ಯೇ ಹಿರಣ್ಮಯಃ' ಎಂಬ ಶ್ರುತಿಯು ಆದಿತ್ಯಮಂಡಲದಲ್ಲಿ
ಅಂತರ್ಯಾಮಿಯಾಗಿರುವ ಹಿರಣ್ಮಯಪುರುಷನನ್ನು ವರ್ಣಿಸುತ್ತದೆ. ಈ ಹಿರಣ್ಮಯಪುರುಷನು
ಯಾರು ? ಎಂಬ ಸಂಶಯಕ್ಕೆ `ಅಸಾವಾದಿತ್ಯೋ ಬ್ರಹ್ಮ' ಎಂಬ ಶ್ರುತಿಯು ಆ ಪುರುಷನು
ಮೋಕ್ಷಪ್ರತಿಪಾದಿತ ವೇದಾಂತಗಳು ಹೇಳುವ ಪರಬ್ರಹ್ಮವೇ ಎಂದು ಹೇಳುತ್ತದೆ.
ಹೀಗೆ ಅಂತರ್ಯಾಮಿ ಭಗವಂತನ ಉಪಾಸನೆಯೇ ಈ ಆದಿತ್ಯಹೃದಯದ ಅಂತರಾರ್ಥವಾಗಿದೆ.
ಇಷ್ಟೇ ಅಲ್ಲದೆ ಮಹಾಭಾರತದಲ್ಲಿ ಅಕ್ಷಯಪಾತ್ರೆಯನ್ನು ಪಡೆಯುವುದಕ್ಕಾಗಿ ಧರ್ಮರಾಜನು
ಆದಿತ್ಯನನ್ನು ಸ್ತುತಿಸುತ್ತಾನೆ. ಯಾಜ್ಞವಲ್ಕ್ಯರು ಈ ಸೂರ್ಯನನ್ನೇ ಸ್ತುತಿಸಿ
ಶುಕ್ಲಯಜುರ್ವೇದವನ್ನು ಪಡೆದಿದ್ದಾರೆ. ನಿತ್ಯಕರ್ಮವಾದ ಸಂಧ್ಯಾವಂದನೆಯಲ್ಲಿ
ಅರ್ಘ್ಯಪ್ರದಾನ, ಗಾಯತ್ರೀಜಪ, ಉಪಸ್ಥಾನಗಳಲ್ಲಿ ಸೂರ್ಯನ ಉಪಾಸನೆಯನ್ನೇ
ಹೇಳಿರುತ್ತದೆ.
ಶ್ರೀಮದ್ರಾಮಾಯಣವು ಗಾಯತ್ರೀಮಂತ್ರದ ಬೀಜಾಕ್ಷರಗಳಿಂದ ಸಮನ್ವಿತವಾಗಿದೆಯೆಂದು
ಸಂಪ್ರದಾಯಜ್ಞರು ಹೇಳಿರುತ್ತಾರೆ. ಗಾಯತ್ರಿಯ ಅಧಿದೇವತೆ ಸೂರ್ಯನು. ಕಥಾನಾಯಕನೂ,
ಸ್ವಯಂ ಮಹಾವಿಷ್ಣುವಿನ ಅವತಾರಪುರುಷನೂ ಆದ ಶ್ರೀರಾಮನು ಸೂರ್ಯವಂಶದವನೇ. ಈ ಎಲ್ಲ
ವಿಚಾರಗಳು ರಾಮಾಯಣದಲ್ಲಿ `ಆದಿತ್ಯ ಹೃದಯ'ದ ಔಚಿತ್ಯವನ್ನು ಸಕಾರಣವಾಗಿ
ಪ್ರತಿಪಾದಿಸುತ್ತವೆ. ಅಗಸ್ತ್ಯರೇ ಹೇಳಿರುವಂತೆ ಆಪತ್ಕಾಲದಲ್ಲಿಯೂ,
ಕಷ್ಟಕಾಲದಲ್ಲಿಯೂ, ಭಯಕಾರಣವು ತೋರಿದಾಗಲೂ, ಈ ಸ್ತೋತ್ರದ ಜಪ ಅತ್ಯಂತ
ಫಲಕಾರಿಯಾಗುತ್ತದೆ. ನಿರ್ಗುಣಸ್ವರೂಪನಾದ ಪರಮಾತ್ಮನೇ ಸೂರ್ಯನು ಎಂದು
ಭಾವಿಸಿಕೊಂಡಲ್ಲಿ ಆತ್ಮಜ್ಞಾನಕ್ಕೆ ಅತ್ಯಂತ ಅವಶ್ಯವಾದ ಸಾಧನವಾದ ಚಿತ್ತಶುದ್ಧಿಯು
ಉಪಾಸಕರಿಗೆ ಸುಲಭವಾಗಿ ದೊರೆತು ತನ್ಮೂಲಕ ಮೋಕ್ಷಕ್ಕೆ ಕಾರಣವಾಗುತ್ತದೆ.
|
|
|
|
ಸ್ತೋತ್ರ |
| |
ಆದಿತ್ಯ ಹೃದಯಮ್
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ | ರಾವಣಂ ಚಾಗ್ರತೋ ದೃಷ್ಟ್ವಾ
ಯುದ್ಧಾಯ ಸಮುಪಸ್ಥಿತಮ್ ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ | ಉಪಾಗಮ್ಯಾಬ್ರವೀದ್ರಾಮಮಗಸ್ತ್ಯೋ
ಭಗವಾನೃಷಿಃ ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ | ಯೇನ ಸರ್ವಾನರೀನ್ವತ್ಸ ಸಮರೇ
ವಿಜಯಿಷ್ಯಸಿ ||
ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ | ಜಯಾವಹಂ ಜಪೇನ್ನಿತ್ಯಮಕ್ಷಯ್ಯಂ
ಪರಮಂ ಶಿವಮ್ ||
ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಮಾಯುರ್ವರ್ಧನಮುತ್ತಮಮ್ ||
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ | ಪೂಜಯಸ್ವ ವಿವಸ್ವಂತಂ ಭಾಸ್ಕರಂ
ಭುವನೇಶ್ವರಮ್ ||
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ | ಏಷ ದೇವಾಸುರಗಣಾನ್ ಲೋಕಾನ್
ಪಾತಿ ಗಭಸ್ತಿಭಿಃ ||
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ | ಮಹೇಂದ್ರೋ ಧನದಃ ಕಾಲೋ
ಯಮಃ ಸೋಮೋ ಹ್ಯಪಾಂಪತಿಃ ||
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ | ವಾಯುರ್ವಹ್ನಿಃ ಪ್ರಜಾಪ್ರಾಣ
ಋತುಕರ್ತಾ ಪ್ರಭಾಕರಃ ||
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ | ಸುವರ್ಣಸದೃಶೋ ಭಾನುಃ
ಸ್ವರ್ಣರೇತಾ ದಿವಾಕರಃ ||
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ | ತಿಮಿರೋನ್ಮಥನಃ
ಶಂಭುಸ್ತ್ವಷ್ಟಾ ಮಾರ್ತಂಡ ಅಂಶುಮಾನ್ ||
ಹಿರಣ್ಯಗರ್ಭಃ ಶಿಶಿರಸ್ತಪನೋ ಭಾಸ್ಕರೋ ರವಿಃ | ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ
ಶಿಶಿರನಾಶನಃ ||
ವ್ಯೋಮನಾಥಸ್ತಮೋಭೇದೀ ಋಗ್ಯಜುಸ್ಸಾಮಪಾರಗಃ | ಘನವೃಷ್ಟಿರಪಾಂ ಮಿತ್ರೋ
ವಿಂಧ್ಯವೀಥೀಪ್ಲವಂಗಮಃ ||
ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ | ಕವಿರ್ವಿಶ್ವೋ ಮಹಾತೇಜಾ ರಕ್ತಃ
ಸರ್ವಭವೋದ್ಭವಃ ||
ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ | ತೇಜಸಾಮಪಿ ತೇಜಸ್ವೀ
ದ್ವಾದಶಾತ್ಮನ್ನಮೋಽಸ್ತು ತೇ ||
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ | ಜ್ಯೋತಿರ್ಗಣಾನಾಂ ಪತಯೇ
ದಿನಾಧಿಪತಯೇ ನಮಃ ||
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ | ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ
ನಮಃ ||
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ | ನಮಃ ಪದ್ಮಪ್ರಬೋಧಾಯ ಮಾರ್ತಂಡಾಯ ನಮೋ
ನಮಃ ||
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ | ಭಾಸ್ವತೇ ಸರ್ವಭಕ್ಷಾಯ
ರೌದ್ರಾಯ ವಪುಷೇ ನಮಃ ||
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ | ಕೃತಘ್ನಘ್ನಾಯ ದೇವಾಯ
ಜ್ಯೋತಿಷಾಂ ಪತಯೇ ನಮಃ ||
ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ | ನಮಸ್ತಮೋಽಭಿನಿಘ್ನಾಯ ರವಯೇ
ಲೋಕಸಾಕ್ಷಿಣೇ ||
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ | ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ
ಗಭಸ್ತಿಭಿಃ ||
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ | ಏಷ ಏವಾಗ್ನಿಹೋತ್ರಂ ಚ ಫಲಂ
ಚೈವಾಗ್ನಿಹೋತ್ರಿಣಾಮ್ ||
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ | ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ
ರವಿಃ ಪ್ರಭುಃ ||
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ | ಕೀರ್ತಯನ್ ಪುರುಷಃ
ಕಶ್ಚಿನ್ನಾವಸೀದತಿ ರಾಘವ ||
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ | ಏತತ್ತ್ರಿಗುಣಿತಂ ಜಪ್ತ್ವಾ
ಯುದ್ಧೇಷು ವಿಜಯಿಷ್ಯಸಿ ||
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ | ಏವಮುಕ್ತ್ವಾ ತದಾಗಸ್ತ್ಯೋ
ಜಗಾಮ ಚ ಯಥಾಗತಮ್ ||
ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ತದಾ | ಧಾರಯಾಮಾಸ ಸುಪ್ರೀತೋ ರಾಘವಃ
ಪ್ರಯತಾತ್ಮವಾನ್ ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ | ತ್ರಿರಾಚಮ್ಯ
ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ | ಸರ್ವಯತ್ನೇನ ಮಹತಾ ವಧೇ
ತಸ್ಯ ಧೃತೋಽಭವತ್ ||
ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||
|